ಮುರುಘಾ ಶ್ರೀಗಳ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಈಗಾಗಲೇ ಎಫ್‍ಐಆರ್ ದಾಖಲಾಗಿದೆ. ಆದರೆ, ರಾಜಿ ಸಂಧಾನಕ್ಕೆ ಪ್ರಯತ್ನವೂ ನಡೆಯುತ್ತಿದೆ. ಆದರೆ ಇಲ್ಲಿ ದಾಖಲಾಗಿರೋದು ಫೋಕ್ಸೋ ಪ್ರಕರಣ ಹೀಗಾಗಿ ಪ್ರಕರಣದಲ್ಲಿ ಕಾನೂನು ಪ್ರಕಾರವೇ ತನಿಖೆ ಆಗಬೇಕಿದೆ. ಇಲ್ಲಿ ಯಾರು ಯಾರನ್ನೇ ಭೇಟಿಯಾದರು ಯಾವುದೇ ಉಪಯೋಗ ಇಲ್ಲ. ಈಗಾಗಲೇ ಸಿಡಬ್ಲೂಸಿ ಅಧಿಕಾರಿಗಳ ಮುಂದೆ ಹೇಳಿಕೆಯನ್ನು ಸಂತ್ರಸ್ತೆಯರು ನೀಡಿದ್ದಾರೆ. ವೈದ್ಯಕೀಯ ಪರೀಕ್ಷೆಯೂ ಆಗಿದೆ. ಇದನ್ನು ಕಾನೂನಿನ ಪ್ರಕಾರವೇ ಇತ್ಯರ್ಥ ಮಾಡಬೇಕಿದೆ. ಅದನ್ನ ಹೊರತುಪಡಿಸಿ ಯಾರ ರಾಜಿ ಪಂಚಾಯಿತಿಗೆ ಇಲ್ಲಿ ಅವಕಾಶ ಇಲ್ಲ. ಇನ್ನು ಇವತ್ತು ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಲಿದ್ದು ಶ್ರೀ ಗಳಿಗೆ ಸಂಕಷ್ಟ ಎದುರಾಗಲಿದೆ.
#publictv #newscafe #murughamutt